ಸರ್ವಜ್ಞನ ವಚನಗಳು
ಸರ್ವಜ್ಞನ ವಚನಗಳು:
ಸರ್ವಜ್ಞನೆಂಬುವವನು ಗರ್ವದಿಂದಾದವನೆ.
ಸರ್ವರೊಳು ಒಂದೊಂದು ನುಡಿ ಕಲಿತು
ಜ್ಞಾನದ ಮಹಾ ಪರ್ವತವಾದ ಸರ್ವಜ್ಞ .
ಅಕ್ಷರಗಳು ಲೆಕ್ಕಕ್ಕೆ ತರ್ಕತಾವಾದಕ್ಕೆ,
ಮಿಕ್ಕ ಓಡುಗಳು ತಿರುಪೆಗೆ, ಮೋಕ್ಷಕ್ಕೆ ಎರಡೇ
ಎರಡು ಅಕ್ಷರಗಳು ಸಾಕೆಂದ ಸರ್ವಜ್ಞ.
ವಿದ್ಯೆಯುಳ್ಳವನ ಮುಖವು ಮುದ್ದು ಬರುವಂತಿಕ್ಕು
ವಿದ್ಯೆಯಿಲ್ಲದವನ ಬರಿಮುಖವು
ಹಾಳೂರ ಹದ್ದಿನಂತಿಕ್ಕು ಸರ್ವಜ್ಞ..
ವಿದ್ಯೆ ಕಲಿಸದ ತಂದೆ ಬುದ್ಧಿ ಹೇಳದ ಗುರುವು
ಬಿದ್ದಿರಲು ಬಂದು ನೋಡದ ತಾಯಿಯು
ಶುದ್ಧ ವೈರಿಗಳು ಸರ್ವಜ್ಞ.
ಆಡದೆಲೆ ಮಾಡುವನು ರೂಢಿಯೊಳಗುತ್ತಮನು
ಆಡಿ ಮಾಡುವನು ಮಧ್ಯಮನು. ಅಧಮ
ತಾನಾಡಿ ಮಾಡದವ ಸರ್ವಜ್ಞ.
ಬಂದುಗಳು ಆದವರು ಬಂದುಂಡು ಹೋಗುವರು
ಬಂಧನವ ಕಳೆಯಲರಿಯರು
ಎಂದ ಸರ್ವಜ್ಞ.
ಸತ್ಯವಂತರ ನೀನು ಸತ್ತರೆಂದೆನಬೇಡ
ಹೆತ್ತಮ್ಮ ಮಗನ ಕರೆದಂತೆ ಕೈಲಾಸಕೆತ್ತಿ
ಕೊಂಬುವರು ಸರ್ವಜ್ಞ.
ಅನ್ನದಾನಗಳಿಗಿಂತ ಮುನ್ನ ದಾನಗಳಿಲ್ಲ
ಅನ್ನಕ್ಕೆ ಮಿಗಿಲು ಇನ್ನಿಲ್ಲ ಜಗದೊಳಗೆ
ಅನ್ನವೇ ಪ್ರಾಣ ಸರ್ವಜ್ಞ.
ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನಬೇಡ , ಮುಂದೆ
ಕಟ್ಟಿಹುದು ಬುತ್ತಿ ಸರ್ವಜ್ಞ.
ನುಡಿದಂತೆ ನಡೆದಾತ ಜಗತ್ತನ್ನು
ಕೂತಲ್ಲಿ ಆಳ್ವ ಎಂದ ಸರ್ವಜ್ಞ.
ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ
ದುಷ್ಟರ ಸಂಗವದು ಕಲ್ಲಕೊಯ್ದು ಕಿಡಿಯ
ತೆಗೆದುಕೊಂಬಂತೆ ಸರ್ವಜ್ಞ.
ಕಾಯವನು ಖಂಡಿಸದೆ, ದೇಹವನು ದಂಡಿಸದೆ
ಉಂಡುಂಡು ತೇಗುವರೆಲ್ಲಾ ಸ್ವರ್ಗವನು ಬಯಸಿದರೆ
ಅದನೇನು ದಡ್ಡನಾಳುವನೇ ಸರ್ವಜ್ಞ.
ಧನವಿರುವ ತನಕ ದಿನಕರನಂತಿಕ್ಕು
ಧನತೀರಿದ ಮರುದಿನವೆ ಹಾಳೂರ
ಶುನಕನಂತಿಕ್ಕು ಸರ್ವಜ್ಞ.
ಕೆಚ್ಚ ಕೈ ಬಾಯಿಗಳು ಇಚ್ಚೆಯಲಿ ಇದ್ದಿಹರೆ
ಅಚ್ಯುತನಪ್ಪ ಅಜನಪ್ಪ ಹರನಪ್ಪ
ನಿಶ್ಚಿಂತನಪ್ಪ ಸರ್ವಜ್ಞ.
ಆಡದೆಲೆ ಮಾಡುವನು ರೂಢಿಯುಳಗುತ್ತಮನು
ಆಡಿ ಮಾಡುವನು ಮಧ್ಯಮನು ಅಧಮ
ತಾನಾಡಿ ಮಾಡದವ ಸರ್ವಜ್ಞ.
ಆನೆ ಬೀದಿಗೆ ಬರಲು ಶ್ವಾನ ತಾ ಬೊಗಳುವುದು
ಶ್ವಾನದಂತಾನೆ ಬೊಗಳಿದರೆ, ಆನೆಯ
ಮಾನವೇ ಹಾನಿ ಸರ್ವಜ್ಞ.
ತಂದೆಗೂ ಗುರುವಿಗೂ ಒಂದು ಅಂತರವುಂಟು
ತಂದೆ ತೋರುವನು ಸದ್ಗುರುವ ಗುರುರಾಯ
ಬಂಧನವ ಕಳೆವ ಸರ್ವಜ್ಞ.
ನಡೆವ ಭೂಮಿಯೊಂದೆ, ಕುಡಿವ ನೀರೊಂದೆ
ಸುಡುವಗ್ನಿಯೊಂದೆ ಇರುತಿರಲು ಕುಲ ಗೋತ್ರ
ನಡುವೆ ಎಂಥಣದು ಸರ್ವಜ್ಞ.
ಮೂರ್ಖಂಗೆ ಬುದ್ಧಿಯನು ನೋರ್ಕಾಲ ಹೇಳಿದರು
ಗೋರ್ಕಲ್ಲ ಮೇಲೆ ಮಳೆ ಗೆರೆದರೆ
ಆ ಕಲ್ಲು ನೀರ್ಕುಡಿವುದೆ ಸರ್ವಜ್ಞ.
ಸಾಲವನು ಕೊಂಬಾಗ ಹಾಲೋಗರುಂಡಂತೆ
ಸಾಲಿಗನು ಬಂದು ಸೆಳೆವಾಗೆ ಕಿಬ್ಬೆದೆಯ
ಕೀಲು ಮುರಿದಂತೆ ಸರ್ವಜ್ಞ.
ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು
ತನ್ನಂತೆ ಪರರ ಬಗೆದೊಡೆ
ಕೈಲಾಸ ಬಿನ್ನಾಣವಕ್ಕು ಸರ್ವಜ್ಞ.
ಬೆಚ್ಚನೆಯ ಮನೆ ವೆಚ್ಚಕ್ಕೆ ಹೊನ್ನು
ಇಚ್ಚೆಯನರಿತು ನಡೆವ ಸತಿಯಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.
ಸೇಂದಿಯನು ಸೇವಿಪನು ಹಂದಿಯಂತಿರುತಿಹನು
ಹಂದಿಯೊಂದೆಡೆ ಉಪಕಾರಿ
ಕುಡುಕ ಹಂದಿಗೂ ಕಡಿಮೆ ಸರ್ವಜ್ಞ.
ಪುಷ್ಪವಿಲ್ಲದ ಪೂಜೆ ಅಶ್ವವಿಲ್ಲದ ಅರಸ
ಭಾಷೆ ಬಾರದವಳ ಗೆಳೆತನವು
ವ್ಯರ್ಥ ಕಾಣಯ್ಯ ಸರ್ವಜ್ಞ.
ಶ್ವಾನ ಬಾಲವು ಡೊಂಕು ಹೀನಮನವದು ಡೊಂಕು
ಕಾನನದಿ ಹರಿವ ಹೊಳೆ ಡೊಂಕು, ಪಿಸುಣಿಗನು
ಶಾನೆ ಡೊಂಕೆಂದ ಸರ್ವಜ್ಞ.
ಅಕ್ಕಿಯನು ಉಂಬುವನು ಹಕ್ಕಿಯಂತಾಗುವನು
ಸಿಕ್ಕು ರೋಗದಲಿ ವದ್ಯನಿಗೆ ರೊಕ್ಕವ
ನಿಕ್ಕುತಲಿರುವ ಸರ್ವಜ್ಞ.
ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ
ಬಲವಿಲ್ಲ ಬಲ್ಲವರಿದ್ದು
ಸಾಹಿತ್ಯ ಎಲ್ಲರಿಗಲ್ಲ ಸರ್ವಜ್ಞ.
ಬಸವಣ್ಣನವರ ವಚನಗಳು:
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ.
ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವನೊಲಿಸುವಾ ಪರಿ
ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ!
ಉಂಬ ಜಂಗಮ ಬಂದರೆ ನಡೆ ಎಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ!
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದರೆ
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯ!
ಏನಿ ಬಂದಿರಿ ಹದುಳಿದ್ದಿರಿ ಎಂದರೆ
ನಿಮ್ಮೈಸಿರಿ ಹಾರಿ ಹೋಹುದೇ?
ಕುಳ್ಳಿರೆಂದರೆ ನೆಲ ಕುಳಿಹೋಹುದೆ?
ಒಡನೆ ನುಡಿದರೆ ಸಿರ ಹೊಟ್ಟೆ ಹೊಡೆವುದೆ?
ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ
ಕೆಡಹಿ ಮೂಗ ಕೊಯ್ವದೆ ಮಾಬನೆ
ಕೂಡಲಸಂಗಯ್ಯ.
ತನುವಿನ ಕೋಪ ಹಿರಿತನದ ಕೇಡು
ಮನದ ಕೋಪ ಅರಿವಿನ ಕೇಡು
ಮನೆಯೊಳಗಣ ಕಿಚ್ಚು ಮನೆಯ
ಸುಟ್ಟಲ್ಲದೆ ನೆರೆಮನೆಯ ಸುಡದು
ಕೂಡಲಸಂಗಮದೇವ.
ಎನಿಸು ಕಾಲ ಕಲ್ಲು ನೀರೊಳಗಿರ್ದಡೇನು?
ನೆನೆದು ಮ್ರುದುವಾಗಬಲ್ಲದೆ,
ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯ
ಮನದಲ್ಲಿ ದೃಢವಿಲ್ಲದನ್ನಕ್ಕ
ನಿಧಾನವ ಕಾಯ್ದಿರ್ದ ಬೆಂತರನಂತೆ
ಅದರ ವಿಧಿ ಎನಗಾಯಿತ್ತು ಕೂಡಲಸಂಗಮದೇವ.
ಮಾಡಿದೆನೆನ್ನದಿರ ಲಿಂಗಕೆ
ನೀಡಿದೆನೆನ್ನದಿರ ಜಂಗಮಕೆ
ಮಡುವ ನೀಡುವ ನಿಜಗುಣವುಳ್ಳವರ
ಕೂಡಿಕೊಂಡಿಪ್ಪ ನಮ್ಮ
ಕೂಡಲಸಂಗಮದೇವ.
ಮಾಡಿದೆನೆಂಬುದು ಮನದಲಿ ಹೊಳೆದರೆ
ನೀಡಿದೆನೆಂಬುದು ನಿಜದಲಿ ತಿಳಿದರೆ
ಹೇಳಿ ಕಾಡಿಸಿತ್ತು ಶಿವನ ಡಂಗುರ.
ದೇವಲೋಕ ಮರ್ತ್ಯಲೋಕವೆಂಬುದು
ಬೇರಿಲ್ಲ ಕಾಣಿರಣ್ಣ.
ಸತ್ಯವ ನುಡಿವುದೇ ದೇವಲೋಕ.
ಮಿಥ್ಯವ ನುಡಿವುದೇ ಮರ್ತ್ಯಲೋಕ
ಆಚಾರವೇ ಸ್ವರ್ಗ, ಅನಾಚಾರವೇ ನರಕ
ನೀವೇ ಪ್ರಮಾಣ ಕೂಡಲಸಂಗಮದೇವ.
ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲ ಬಾರದು.
ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯಿ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನರಿಗೆ ದೂರುವೆ
ತಂದೆ ಕೂಡಲಸಂಗಮದೇವ
ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ
ಬಳಿಕ ಬಿಡುಸುವವರಾರುಂಟು.
ಕೊಲುವವನೆ ಮಾದಿಗ
ಹೊಲಸ ತಿಂಬವನೆ ಹೊಲೆಯ
ಕುಲವೆನೋ? ಅವದಿರ ಬುಲವೇನೋ?
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ
ನಮ್ಮ ಕೂಡಲಸಂಗನ ಶರಣರೇ ಕುಲಜರು.
ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯ.
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ.
ಕೂಡಲಸಂಗಮದೇವ ಕೇಳಯ್ಯ
ಸ್ಥಾವರಕೆ ಅಳಿವುಂಟು, ಜಂಗಮಕೆ ಅಳಿವಿಲ್ಲ.
ಮಾಡಿಮಾಡಿ ಕೆಟ್ಟರೋ ಮನನಿಲ್ಲದೆ
ನೀಡಿ ನೀಡಿ ಕೆಟ್ಟರೋ ನಿಜವಿಲ್ಲದೆ
ಮಾಡಿದೆನೆನ್ನದಿರ ಲಿಂಗಕ್ಕೆ
ನೀಡಿದೆನೆನ್ನದಿರ ಲಿಂಗಕ್ಕೆ
ಮಾಡಿದೆನೆಂಬುದು ಮನದಲ್ಲಿ ಹೊಳೆದರೆ, ನೀಡಿದೆನೆಂಬುದು
ನಿಜದಲ್ಲಿ ತಿಳಿದರೆ, ಹೇಳಿಸಿ ಕಾಡಿಸಿತ್ತು ಶಿವನ ಡಂಗುರ.
ಸರ್ವಜ್ಞನೆಂಬುವವನು ಗರ್ವದಿಂದಾದವನೆ.
ಸರ್ವರೊಳು ಒಂದೊಂದು ನುಡಿ ಕಲಿತು
ಜ್ಞಾನದ ಮಹಾ ಪರ್ವತವಾದ ಸರ್ವಜ್ಞ .
ಅಕ್ಷರಗಳು ಲೆಕ್ಕಕ್ಕೆ ತರ್ಕತಾವಾದಕ್ಕೆ,
ಮಿಕ್ಕ ಓಡುಗಳು ತಿರುಪೆಗೆ, ಮೋಕ್ಷಕ್ಕೆ ಎರಡೇ
ಎರಡು ಅಕ್ಷರಗಳು ಸಾಕೆಂದ ಸರ್ವಜ್ಞ.
ವಿದ್ಯೆಯುಳ್ಳವನ ಮುಖವು ಮುದ್ದು ಬರುವಂತಿಕ್ಕು
ವಿದ್ಯೆಯಿಲ್ಲದವನ ಬರಿಮುಖವು
ಹಾಳೂರ ಹದ್ದಿನಂತಿಕ್ಕು ಸರ್ವಜ್ಞ..
ವಿದ್ಯೆ ಕಲಿಸದ ತಂದೆ ಬುದ್ಧಿ ಹೇಳದ ಗುರುವು
ಬಿದ್ದಿರಲು ಬಂದು ನೋಡದ ತಾಯಿಯು
ಶುದ್ಧ ವೈರಿಗಳು ಸರ್ವಜ್ಞ.
ಆಡದೆಲೆ ಮಾಡುವನು ರೂಢಿಯೊಳಗುತ್ತಮನು
ಆಡಿ ಮಾಡುವನು ಮಧ್ಯಮನು. ಅಧಮ
ತಾನಾಡಿ ಮಾಡದವ ಸರ್ವಜ್ಞ.
ಬಂದುಗಳು ಆದವರು ಬಂದುಂಡು ಹೋಗುವರು
ಬಂಧನವ ಕಳೆಯಲರಿಯರು
ಎಂದ ಸರ್ವಜ್ಞ.
ಸತ್ಯವಂತರ ನೀನು ಸತ್ತರೆಂದೆನಬೇಡ
ಹೆತ್ತಮ್ಮ ಮಗನ ಕರೆದಂತೆ ಕೈಲಾಸಕೆತ್ತಿ
ಕೊಂಬುವರು ಸರ್ವಜ್ಞ.
ಅನ್ನದಾನಗಳಿಗಿಂತ ಮುನ್ನ ದಾನಗಳಿಲ್ಲ
ಅನ್ನಕ್ಕೆ ಮಿಗಿಲು ಇನ್ನಿಲ್ಲ ಜಗದೊಳಗೆ
ಅನ್ನವೇ ಪ್ರಾಣ ಸರ್ವಜ್ಞ.
ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನಬೇಡ , ಮುಂದೆ
ಕಟ್ಟಿಹುದು ಬುತ್ತಿ ಸರ್ವಜ್ಞ.
ನುಡಿದಂತೆ ನಡೆದಾತ ಜಗತ್ತನ್ನು
ಕೂತಲ್ಲಿ ಆಳ್ವ ಎಂದ ಸರ್ವಜ್ಞ.
ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ
ದುಷ್ಟರ ಸಂಗವದು ಕಲ್ಲಕೊಯ್ದು ಕಿಡಿಯ
ತೆಗೆದುಕೊಂಬಂತೆ ಸರ್ವಜ್ಞ.
ಕಾಯವನು ಖಂಡಿಸದೆ, ದೇಹವನು ದಂಡಿಸದೆ
ಉಂಡುಂಡು ತೇಗುವರೆಲ್ಲಾ ಸ್ವರ್ಗವನು ಬಯಸಿದರೆ
ಅದನೇನು ದಡ್ಡನಾಳುವನೇ ಸರ್ವಜ್ಞ.
ಧನವಿರುವ ತನಕ ದಿನಕರನಂತಿಕ್ಕು
ಧನತೀರಿದ ಮರುದಿನವೆ ಹಾಳೂರ
ಶುನಕನಂತಿಕ್ಕು ಸರ್ವಜ್ಞ.
ಕೆಚ್ಚ ಕೈ ಬಾಯಿಗಳು ಇಚ್ಚೆಯಲಿ ಇದ್ದಿಹರೆ
ಅಚ್ಯುತನಪ್ಪ ಅಜನಪ್ಪ ಹರನಪ್ಪ
ನಿಶ್ಚಿಂತನಪ್ಪ ಸರ್ವಜ್ಞ.
ಆಡದೆಲೆ ಮಾಡುವನು ರೂಢಿಯುಳಗುತ್ತಮನು
ಆಡಿ ಮಾಡುವನು ಮಧ್ಯಮನು ಅಧಮ
ತಾನಾಡಿ ಮಾಡದವ ಸರ್ವಜ್ಞ.
ಆನೆ ಬೀದಿಗೆ ಬರಲು ಶ್ವಾನ ತಾ ಬೊಗಳುವುದು
ಶ್ವಾನದಂತಾನೆ ಬೊಗಳಿದರೆ, ಆನೆಯ
ಮಾನವೇ ಹಾನಿ ಸರ್ವಜ್ಞ.
ತಂದೆಗೂ ಗುರುವಿಗೂ ಒಂದು ಅಂತರವುಂಟು
ತಂದೆ ತೋರುವನು ಸದ್ಗುರುವ ಗುರುರಾಯ
ಬಂಧನವ ಕಳೆವ ಸರ್ವಜ್ಞ.
ನಡೆವ ಭೂಮಿಯೊಂದೆ, ಕುಡಿವ ನೀರೊಂದೆ
ಸುಡುವಗ್ನಿಯೊಂದೆ ಇರುತಿರಲು ಕುಲ ಗೋತ್ರ
ನಡುವೆ ಎಂಥಣದು ಸರ್ವಜ್ಞ.
ಮೂರ್ಖಂಗೆ ಬುದ್ಧಿಯನು ನೋರ್ಕಾಲ ಹೇಳಿದರು
ಗೋರ್ಕಲ್ಲ ಮೇಲೆ ಮಳೆ ಗೆರೆದರೆ
ಆ ಕಲ್ಲು ನೀರ್ಕುಡಿವುದೆ ಸರ್ವಜ್ಞ.
ಸಾಲವನು ಕೊಂಬಾಗ ಹಾಲೋಗರುಂಡಂತೆ
ಸಾಲಿಗನು ಬಂದು ಸೆಳೆವಾಗೆ ಕಿಬ್ಬೆದೆಯ
ಕೀಲು ಮುರಿದಂತೆ ಸರ್ವಜ್ಞ.
ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು
ತನ್ನಂತೆ ಪರರ ಬಗೆದೊಡೆ
ಕೈಲಾಸ ಬಿನ್ನಾಣವಕ್ಕು ಸರ್ವಜ್ಞ.
ಬೆಚ್ಚನೆಯ ಮನೆ ವೆಚ್ಚಕ್ಕೆ ಹೊನ್ನು
ಇಚ್ಚೆಯನರಿತು ನಡೆವ ಸತಿಯಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.
ಸೇಂದಿಯನು ಸೇವಿಪನು ಹಂದಿಯಂತಿರುತಿಹನು
ಹಂದಿಯೊಂದೆಡೆ ಉಪಕಾರಿ
ಕುಡುಕ ಹಂದಿಗೂ ಕಡಿಮೆ ಸರ್ವಜ್ಞ.
ಪುಷ್ಪವಿಲ್ಲದ ಪೂಜೆ ಅಶ್ವವಿಲ್ಲದ ಅರಸ
ಭಾಷೆ ಬಾರದವಳ ಗೆಳೆತನವು
ವ್ಯರ್ಥ ಕಾಣಯ್ಯ ಸರ್ವಜ್ಞ.
ಶ್ವಾನ ಬಾಲವು ಡೊಂಕು ಹೀನಮನವದು ಡೊಂಕು
ಕಾನನದಿ ಹರಿವ ಹೊಳೆ ಡೊಂಕು, ಪಿಸುಣಿಗನು
ಶಾನೆ ಡೊಂಕೆಂದ ಸರ್ವಜ್ಞ.
ಅಕ್ಕಿಯನು ಉಂಬುವನು ಹಕ್ಕಿಯಂತಾಗುವನು
ಸಿಕ್ಕು ರೋಗದಲಿ ವದ್ಯನಿಗೆ ರೊಕ್ಕವ
ನಿಕ್ಕುತಲಿರುವ ಸರ್ವಜ್ಞ.
ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ
ಬಲವಿಲ್ಲ ಬಲ್ಲವರಿದ್ದು
ಸಾಹಿತ್ಯ ಎಲ್ಲರಿಗಲ್ಲ ಸರ್ವಜ್ಞ.
ಬಲ್ಲೆನೆನುವ ಮಾತು ಹುಸಿ ಕಾಣೊ
ಬಲ್ಲೆನೆನಬೇಡ,
ಸುಮ್ಮನಿರುವವನೆ ಸರ್ವಜ್ಞ.
ಬಸವಣ್ಣನವರ ವಚನಗಳು:
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ.
ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವನೊಲಿಸುವಾ ಪರಿ
ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ!
ಉಂಬ ಜಂಗಮ ಬಂದರೆ ನಡೆ ಎಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ!
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದರೆ
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯ!
ಏನಿ ಬಂದಿರಿ ಹದುಳಿದ್ದಿರಿ ಎಂದರೆ
ನಿಮ್ಮೈಸಿರಿ ಹಾರಿ ಹೋಹುದೇ?
ಕುಳ್ಳಿರೆಂದರೆ ನೆಲ ಕುಳಿಹೋಹುದೆ?
ಒಡನೆ ನುಡಿದರೆ ಸಿರ ಹೊಟ್ಟೆ ಹೊಡೆವುದೆ?
ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ
ಕೆಡಹಿ ಮೂಗ ಕೊಯ್ವದೆ ಮಾಬನೆ
ಕೂಡಲಸಂಗಯ್ಯ.
ತನುವಿನ ಕೋಪ ಹಿರಿತನದ ಕೇಡು
ಮನದ ಕೋಪ ಅರಿವಿನ ಕೇಡು
ಮನೆಯೊಳಗಣ ಕಿಚ್ಚು ಮನೆಯ
ಸುಟ್ಟಲ್ಲದೆ ನೆರೆಮನೆಯ ಸುಡದು
ಕೂಡಲಸಂಗಮದೇವ.
ಎನಿಸು ಕಾಲ ಕಲ್ಲು ನೀರೊಳಗಿರ್ದಡೇನು?
ನೆನೆದು ಮ್ರುದುವಾಗಬಲ್ಲದೆ,
ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯ
ಮನದಲ್ಲಿ ದೃಢವಿಲ್ಲದನ್ನಕ್ಕ
ನಿಧಾನವ ಕಾಯ್ದಿರ್ದ ಬೆಂತರನಂತೆ
ಅದರ ವಿಧಿ ಎನಗಾಯಿತ್ತು ಕೂಡಲಸಂಗಮದೇವ.
ಮಾಡಿದೆನೆನ್ನದಿರ ಲಿಂಗಕೆ
ನೀಡಿದೆನೆನ್ನದಿರ ಜಂಗಮಕೆ
ಮಡುವ ನೀಡುವ ನಿಜಗುಣವುಳ್ಳವರ
ಕೂಡಿಕೊಂಡಿಪ್ಪ ನಮ್ಮ
ಕೂಡಲಸಂಗಮದೇವ.
ಮಾಡಿದೆನೆಂಬುದು ಮನದಲಿ ಹೊಳೆದರೆ
ನೀಡಿದೆನೆಂಬುದು ನಿಜದಲಿ ತಿಳಿದರೆ
ಹೇಳಿ ಕಾಡಿಸಿತ್ತು ಶಿವನ ಡಂಗುರ.
ದೇವಲೋಕ ಮರ್ತ್ಯಲೋಕವೆಂಬುದು
ಬೇರಿಲ್ಲ ಕಾಣಿರಣ್ಣ.
ಸತ್ಯವ ನುಡಿವುದೇ ದೇವಲೋಕ.
ಮಿಥ್ಯವ ನುಡಿವುದೇ ಮರ್ತ್ಯಲೋಕ
ಆಚಾರವೇ ಸ್ವರ್ಗ, ಅನಾಚಾರವೇ ನರಕ
ನೀವೇ ಪ್ರಮಾಣ ಕೂಡಲಸಂಗಮದೇವ.
ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲ ಬಾರದು.
ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯಿ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನರಿಗೆ ದೂರುವೆ
ತಂದೆ ಕೂಡಲಸಂಗಮದೇವ
ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ
ಬಳಿಕ ಬಿಡುಸುವವರಾರುಂಟು.
ಕೊಲುವವನೆ ಮಾದಿಗ
ಹೊಲಸ ತಿಂಬವನೆ ಹೊಲೆಯ
ಕುಲವೆನೋ? ಅವದಿರ ಬುಲವೇನೋ?
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ
ನಮ್ಮ ಕೂಡಲಸಂಗನ ಶರಣರೇ ಕುಲಜರು.
ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯ.
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ.
ಕೂಡಲಸಂಗಮದೇವ ಕೇಳಯ್ಯ
ಸ್ಥಾವರಕೆ ಅಳಿವುಂಟು, ಜಂಗಮಕೆ ಅಳಿವಿಲ್ಲ.
ಮಾಡಿಮಾಡಿ ಕೆಟ್ಟರೋ ಮನನಿಲ್ಲದೆ
ನೀಡಿ ನೀಡಿ ಕೆಟ್ಟರೋ ನಿಜವಿಲ್ಲದೆ
ಮಾಡಿದೆನೆನ್ನದಿರ ಲಿಂಗಕ್ಕೆ
ನೀಡಿದೆನೆನ್ನದಿರ ಲಿಂಗಕ್ಕೆ
ಮಾಡಿದೆನೆಂಬುದು ಮನದಲ್ಲಿ ಹೊಳೆದರೆ, ನೀಡಿದೆನೆಂಬುದು
ನಿಜದಲ್ಲಿ ತಿಳಿದರೆ, ಹೇಳಿಸಿ ಕಾಡಿಸಿತ್ತು ಶಿವನ ಡಂಗುರ.
Comments
Post a Comment