Posts

ಸರ್ವಜ್ಞನ ವಚನಗಳು

ಸರ್ವಜ್ಞನ  ವಚನಗಳು:  ಸರ್ವಜ್ಞನೆಂಬುವವನು ಗರ್ವದಿಂದಾದವನೆ.  ಸರ್ವರೊಳು ಒಂದೊಂದು ನುಡಿ ಕಲಿತು  ಜ್ಞಾನದ ಮಹಾ ಪರ್ವತವಾದ ಸರ್ವಜ್ಞ . ಅಕ್ಷರಗಳು ಲೆಕ್ಕಕ್ಕೆ ತರ್ಕತಾವಾದಕ್ಕೆ, ಮಿಕ್ಕ ಓಡುಗಳು ತಿರುಪೆಗೆ, ಮೋಕ್ಷಕ್ಕೆ ಎರಡೇ ಎರಡು ಅಕ್ಷರಗಳು ಸಾಕೆಂದ ಸರ್ವಜ್ಞ. ವಿದ್ಯೆಯುಳ್ಳವನ ಮುಖವು ಮುದ್ದು ಬರುವಂತಿಕ್ಕು ವಿದ್ಯೆಯಿಲ್ಲದವನ ಬರಿಮುಖವು ಹಾಳೂರ ಹದ್ದಿನಂತಿಕ್ಕು ಸರ್ವಜ್ಞ.. ವಿದ್ಯೆ ಕಲಿಸದ ತಂದೆ ಬುದ್ಧಿ ಹೇಳದ ಗುರುವು ಬಿದ್ದಿರಲು ಬಂದು ನೋಡದ ತಾಯಿಯು ಶುದ್ಧ ವೈರಿಗಳು ಸರ್ವಜ್ಞ. ಆಡದೆಲೆ ಮಾಡುವನು ರೂಢಿಯೊಳಗುತ್ತಮನು ಆಡಿ ಮಾಡುವನು ಮಧ್ಯಮನು. ಅಧಮ ತಾನಾಡಿ ಮಾಡದವ ಸರ್ವಜ್ಞ. ಬಂದುಗಳು ಆದವರು ಬಂದುಂಡು ಹೋಗುವರು ಬಂಧನವ ಕಳೆಯಲರಿಯರು ಎಂದ ಸರ್ವಜ್ಞ. ಸತ್ಯವಂತರ ನೀನು ಸತ್ತರೆಂದೆನಬೇಡ ಹೆತ್ತಮ್ಮ ಮಗನ ಕರೆದಂತೆ ಕೈಲಾಸಕೆತ್ತಿ ಕೊಂಬುವರು ಸರ್ವಜ್ಞ. ಅನ್ನದಾನಗಳಿಗಿಂತ ಮುನ್ನ ದಾನಗಳಿಲ್ಲ ಅನ್ನಕ್ಕೆ ಮಿಗಿಲು ಇನ್ನಿಲ್ಲ ಜಗದೊಳಗೆ ಅನ್ನವೇ ಪ್ರಾಣ ಸರ್ವಜ್ಞ. ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಕೊಟ್ಟಿದ್ದು ಕೆಟ್ಟಿತೆನಬೇಡ , ಮುಂದೆ ಕಟ್ಟಿಹುದು ಬುತ್ತಿ ಸರ್ವಜ್ಞ. ನುಡಿದಂತೆ ನಡೆದಾತ ಜಗತ್ತನ್ನು ಕೂತಲ್ಲಿ ಆಳ್ವ ಎಂದ ಸರ್ವಜ್ಞ. ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ದುಷ್ಟರ ಸಂಗವದು ಕಲ್ಲಕೊಯ್ದು ಕಿಡಿಯ ತೆಗೆದುಕೊಂಬಂತೆ ಸರ್ವಜ್ಞ. ಕಾಯವನು ಖಂಡಿಸದೆ, ದೇಹವನು ದಂಡಿಸದೆ ಉಂಡುಂಡು ತೇಗುವರೆಲ್ಲಾ ಸ...