ಇತರೆ

 ಓಗಟುಗಳು:

ಮನೆಯಲ್ಲಿದ್ದರೆ ಮೊಗ್ಗು, ಹೊರಗೆ ಬಂದರೆ ಹೂ. - ಛತ್ರಿ

ಹಗ್ಗ ಆಸೈತೆ, ಆನೆ ಮಲಗೈತೆ. - ಕುಂಬಳಕಾಯಿ

ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ. - ತಿಲಕ ಅಥವಾ ಬೊಟ್ಟು

ಕಳ್ಳ ಪೋಲೀಸ್ ಇಬ್ಬರೂ ಓಡ್ತಾ ಇರ್ತಾರೆ; ಎಷ್ಟೊಂದು ಬಾರಿ ಪೋಲೀಸ್ ಕಳ್ಳನ್ನ ಹಿಡ್ಕೊತಾರೆ ಮತ್ತೆ ಬಿಟ್ಟುಬಿಡ್ತಾರೆ. - ಗಡಿಯಾರದ ಮುಳ್ಳುಗಳು

ಅಮ್ಮನ ಸೀರೆ ಮಡಸೋಕಾಗಲ್ಲ; ಅಪ್ಪನ ದುಡ್ಡು ಎಣಿಸೋಕಾಗಲ್ಲ. - ಆಕಾಶ ಮತ್ತು ನಕ್ಷತ್ರಗಳು

ಹೊಟ್ಟೆ ಒಳಗೆ ಕೈ ಹಾಕಿದರೆ ಬಾಯಿ ಬಿಡುತ್ತೆ - ಬೀಗ ಮತ್ತು ಬೀಗದ ಕೈ

ಕೊಟ್ಟು ಕೆಟ್ಟ - ಬಲಿ ಚಕ್ರವರ್ತಿ
ಕೊಡದೇ ಕೆಟ್ಟ- ದುರ್ಯೋಧನ
ಮುಟ್ಟಿ ಕೆಟ್ಟ - ದುಶ್ಯಾಸನ
ಮುಟ್ಟದೇ ಕೆಟ್ಟ - ರಾವಣ

ದಾಸ್ ಬುರುಡೆ ದೌಲತ್ ಬುರುಡೆ ಲೋಕಕ್ಕೆಲ್ಲಾ ಎರಡೇ ಬುರುಡೆ - ಸೂರ್ಯ, ಚಂದ್ರ

ಅಂಗೈ ಅಗಲ ಗದ್ದೆ, ಗದ್ದೆಯಲ್ಲಿ ನೀರು, ನೀರಲ್ಲಿ ಬೇರು ಆ ಬೇರಿಗೆ ಬೆಂಕಿ - ದೀಪ

ಒಳಗೆ ಹೋದಾಗ ಮೂರು ಬಣ್ಣ, ಹೊರಗೆ ಬಂದಾಗ ಓಂದೇ ಬಣ್ಣ - ಎಲೆ, ಅಡಿಕೆ, ಸುಣ್ಣ

ಅಣ್ಣ ಎಂದರೆ ತೆರೆಯುತ್ತೆ; ತಮ್ಮ ಎಂದರೆ ಮುಚ್ಚುತ್ತೆ - ತುಟಿಗಳು

ಸಿಂಹವುಂಟು ಅರಣ್ಯವಲ್ಲ; ಅಕ್ಷರಗಳುಂಟು ಪುಸ್ತಕವಲ್ಲ; ದುಂಡಾಗಿರುವೆ ಪುಸ್ತಕವಲ್ಲ. -ನಾಣ್ಯ 

ಕಪ್ಪೆ ಮುಟ್ಟದ ಕೈಲಾಸದ ನೀರು -ಎಳೆನೀರು

ಗರಿಕೆ ಆಸೆ ದೇವರು ವರ್ಷಕ್ಕೊಮ್ಮೆ ಬರ್ತಾನೆ - ಗಣಪತಿ

ಊರೆಲ್ಲಾ ಸುತ್ತುತ್ತೆ ಮನೆ ಬಾಗಿಲಾಲ್ಲಿ ಬಂದು ನಿಲ್ಲುತ್ತೆ. - ಚಪ್ಪಲಿಗಳು

ಕಲ್ಲನ್ನು ತುಳಿಯುತ್ತೆ; ಮುಳ್ಳನ್ನು ಮೂಯುತ್ತೆ, ನೀರು ಕಂಡ್ರೆ ನಿಲ್ಲುತ್ತೆ. - ಚಪ್ಪಲಿಗಳು

ಅಂಗಡಿಯಲ್ಲಿ ತರೋದು; ಮನೆಯಲ್ಲಿ ಕೂತ್ಕೊಂಡು ಅಳೋದು. - ಈರುಳ್ಳಿ.

ಬೆಳ್ಳಿ ತಿಂತಾರೆ! ಚಿನ್ನ ಬಿಸಾಡ್ತಾರೆ. - ಬಾಳೆಹಣ್ಣು

ಹೋದ ನೇಂಟ ! ಬಂದ ನೇಂಟ; ಬಂದ ದಾರಿ ಗೊತ್ತಿಲ್ಲ. - ನೆರಳು

ಹೋಗುತ್ತಾ ಬರುತ್ತಾ ಇರುವುದು - ಸಿರಿತನ , ಬಡತನ
ಹೋದ ಮೇಲೆ ಬರಲಾರದುದು - ಮಾನ ,ಪ್ರಾಣ

ಎರಡು ಮನೆಗೆ ಒಂದೇ ದೂಲ. - ಮೂಗು

ಹಿಡಿ ಹಿಡಿದರೆ ಹಿಡಿ ತುಂಬಾ ! ಬಿಟ್ಟರೆ ಮನೆ ತುಂಬಾ. - ದೀಪದ ಬೆಳಕು

ಒಳ್ಳೆ ಕೋಳಿ ಮುಳ್ಳಲ್ಲಿ ಮೊಟ್ಟೆ ಇಕ್ಕದೆ. - ನಿಂಬೆ ಹಣ್ಣು.

ಅಕ್ಕನ ಮನೆಗೆ ತಂಗಿ ಹೋಗಬಹುದು; ಆದರೆ ತಂಗಿಯ ಮನೆಗೆ ಅಕ್ಕ ಹೋಗೋಕಾಗಲ್ಲ. - ಬಿಂದಿಗೆ, ಚೆಂಬು

ಊರಿಗೆಲ್ಲಾ ಒಂದೇ ಕಂಬಳಿ. - ಆಕಾಶ

ಸುತ್ತಲೂ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ. -ಮೊಟ್ಟೆ

ಹಸಿರು ಕೋಟೆ ಒಳಗಡೆ ಕೆಂಪು ಸಾಮ್ರಾಜ್ಯ; ಕೆಂಪು ಸಾಮ್ರಾಜ್ಯದೊಳಗೆ ಕಪ್ಪು ಸೈನಿಕರು. - ಕಲ್ಲಂಗಡಿ

ಕತ್ತಲೆ ಮನೆಯಲ್ಲಿ ಕಂಬ ಬಿದ್ದರೆ, ನಿಮ್ಮಪ್ಪನೂ ಎತ್ತಲಾರ; ನಮ್ಮಪ್ಪನೂ ಎತ್ತಲಾರ. - ಸೂಜಿ

ಚೋಟುದ್ದ ಹುಡುಗಿಗೆ ಮಾರುದ್ದ ಜಡೆ. - ಸೂಜಿ, ದಾರ.

ಕಪ್ಪುಂಟು ಕಸ್ತೂರಿಯಲ್ಲ, ಬಿಳುಪುಂಟು ಸುಣ್ಣವಲ್ಲ, ನೀರುಂಟು ಬಾವಿಯಲ್ಲ, ರೆಕ್ಕೆಯುಂಟು ಪಕ್ಷಿಯಲ್ಲ. - ಕಣ್ಣು.

ಅವ್ವ ಮುಳ್ಳಿ, ಮಗಳು ಕೆಂಪಗೆ ಚೆಂದಾಗವ್ಳೆ. - ಹಲಸಿನ ಹಣ್ಣು.

ಊರುಂಟು ಜನರಿಲ್ಲ; ರಸ್ತೆಯುಂಟು ವಾಹನವಿಲ್ಲ;  ನದಿಯುಂಟು ನೀರಿಲ್ಲ. - ಭೂಪಟ

ಗಾದೆ ಮಾತುಗಳು:
  1. ಅತಿ ಆಸೆ ಗತಿಗೇಡು.
  2. ಆಸೆಯೆ ದುಃಖಕ್ಕೆ ಮೂಲ
  3. ಕಾಯಕವೇ ಕೈಲಾಸ
  4. ಹಗಲು ಕಂಡ ಬಾವಿಗೆ ಇರುಳು ಬಿದ್ದ ಹಾಗೆ.
  5. ಉಪಾಯಬಲ್ಲವನಿಗೆ ಅಪಾಯವಿಲ್ಲ.
  6. ಸಿರಿತನ ಬಂದಾಗ ಕರೆದು ದಾನವ ಮಾಡು.
  7. ಹಾಸಿಗೆಯಿದ್ದಷ್ಟು ಕಾಲು ಚಾಚು.
  8. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು.
  9. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
  10. ಮನೆಯೇ ಮಂತ್ರಾಲಯ; ಮನಸೇ ದೇವಾಲಯ. 
  11. ಕುಳಿತು ಉಣ್ಣುವವನಿಗೆ ಕುಡಿಕೆ ಹೊನ್ನೂ ಸಾಲದು.
  12. ಯಥಾ ರಾಜ; ತಥಾ ಪ್ರಜಾ.
  13. ಹಿಸಿದಾಗ ಹಳಸನ್ನವೂ ಮೃಷ್ಟಾನ್ನವಾದೀತು.
  14. ಹಸಿದು ಹಲಸಿನ ಹಣ್ಣು ತಿನ್ನು; ಹೊಟ್ಟೆ ತುಂಬಿದ ಮೇಲೆ ಮಾವಿನ ಹಣ್ಣು ತಿನ್ನು. 
  15. ಹುಟ್ಟಿದವ ಸಾಯಲೇಬೇಕು.
  16. ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆ ಪೆಟ್ಟು.
  17. ಯೋಗ ಇದ್ದಷ್ಟೇ ಭೋಗ.
  18. ತಾಳಿದವನು ಬಾಳಿಯಾನು. 
  19. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ.
  20. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು.
  21. ಬೆಳೆಯುವ ಸಿರಿ ಮೊಳ್ಕೆಯಲ್ಲಿಯೆ.
  22. ತಾಯಿಯೆ ಮೊದಲ ದೇವರು.
  23. ಊಟಕ್ಕಿಲ್ಲದ ಉಪ್ಪಿನಕಾಯಿ ಸಮಯಕ್ಕೆ ಆಗದ ಸಂಪತ್ತು ಎಷ್ಟಿದ್ದರೇನು?
  24. ಶಿವ ಪೂಜೆ ಮಧ್ಯೆ ಕರಡಿ ಬಿಟ್ಟ ಹಾಗೆ.
  25. ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ.
  26. ಉಪ್ಪರಿಗೆ ಮೇಲಿದ್ದರೂ ತಿಪ್ಪೆ ಮರೀಬಾರ್ದು.
  27. ಬೆಳ್ಳಗಿರುವುದೆಲ್ಲ ಹಾಲಲ್ಲ.
  28. ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೇ?
  29. ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ.
  30. ಕೈಲಾಗದವನು ಮೈ ಪರಚಿಕೊಂಡ.
  31. ನೋಡುವ ಕಣ್ಣಿರಲು ಸೌಂದರ್ಯ; ಕೇಳುವ ಕಿವಿಯಿರಲು ಸಂಗೀತ. 
  32. ಕೋಳಿ ಕೂಗಿದರೆ ಬೆಳಗಾಗುವುದೇ?
  33. ಕುಣಿಯಲಾರದವಳು ನೆಲ ಡೊಂಕು ಎಂದಳಂತೆ.
  34. ತಂದೆ ತಾಯಿ ಇಬ್ಬರು ಕಣ್ಣಿಗೆ ಕಾಣುವ ದೇವರು.
  35. ಆಕಳು ಕಪ್ಪಾದರೆ ಹಾಲು ಕಪ್ಪೇ?
  36. ಸಗಣಿಯವನೊಂದಿಗೆ ಗೆಳೆತನಕ್ಕಿಂತ, ಗಂಧದವನೊಂದಿಗೆ ಗುದ್ಧಾಟವೇ ಲೇಸು.
  37. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
  38. ಬಯಸಿ ಬಯಸಿ ಮದುವೆಯಾದ್ರೆ ಬಡಿಯೊ ಗಂಡ ಸಿಕ್ಕಿದ.
  39. ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು.
  40. ಕಾಗೆಗೇಕೆ ಕಾಡಿಗೆ; ಗೂಡಿಗೇಕೆ ಬಾಡಿಗೆ.
  41. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ.
  42. ಸಿರಿತನ ಬ್ಂದಾಗ ಊರೆಲ್ಲ ನೆಂಟರೇ.
  43. ಆಳಾಗಿ ದುಡಿ; ಅರಸನಾಗಿ ಉಣ್ಣು.
  44. ಬೇಲೆನೇ ಎದ್ದು ಹೊಲ ಮೇಯ್ದ ಹಾಗೆ.
  45. ಆರು ಕಾಸಿನ ಸಂಬಳ ಆದರೂ ಅರಮನೆಯ ಕೆಲಸ ಮಾಡು.
  46. ಆಲಸ್ಯಾತ್ ಅಮೃತಂ ವಿಷಂ.
  47. ಆರುವ ದೀಪಕ್ಕೆ ಕಾಂತಿ ಹೆಚ್ಚು.
  48. ಊಟಕ್ಕೆ ಮೊದಲಿರಬೇಕು; ಜಗಳಕ್ಕೆ ಹಿಂದಿರಬೇಕು. 
  49. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ.
  50. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು.
  51. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ. 
  52. ಯಾವ ಹುತ್ತದಲ್ಲಿ ಯಾವ ಹಾವಿದೆಯೊ.
  53. ಅಪ್ಪನ ಮಾತು ಆನೆಯ ಬಲ.
  54. ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ. 
  55. ಮನೆ ದೂರವಾದರೆ ಮನ ದೂರವೇ?
  56. ತೊಟ್ಟಿಲೊಳಗಿನ ಕೂಸಾದರೂ ಅಳದೆ ಹಾಲು ಕೊಡರು.
  57. ಆಪತ್ತಿಗಾದವನೇ ನೆಂಟ.
  58. ನಡೆಯುವವನೇ ಎಡವುತ್ತಾನೆ.
  59. ಅಣ್ಣ ತಮ್ಮನ ಬೇರೆ ಮಾಡಬೇಡ.
  60. ಕೆಟ್ಟ ಮೇಲೆ ಬುದ್ಧಿ ಬಂತು.
  61. ಆರೋಗ್ಯವೇ ಭಾಗ್ಯ.
  62. ಆಳು ನೋಡಿದ್ರೆ ಅಬ್ಬಬ್ಬಾ, ಬಾಳು ನೋಡಿದ್ರೆ ಬಾಯಿ ಬಡ್ಕೋಬೇಕು.
  63. ಕತ್ತೆ ಮರಿ ಚೆಂದ, ಮುತ್ತುಗದ ಹೂ ಚೆಂದ.
  64. ತಿಳಿದು ತಪ್ಪು ಮಾಡಿದವನಿಗೆ ನೂರು ದೇವರಾದರೆ, ತಿಳಿಯದೆ ತಪ್ಪು ಮಾಡಿದವನಿಗೆ ಸಾವಿರ ದೇವರು.
  65. ಕೋಟಿ ಕೊಟ್ಟರೂ ಸೂರ್ಯನಿಲ್ಲದೆ ಜಗಕೆ ಬೆಳಕಿಲ್ಲ.
  66. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡಿಸಿಕೊಂಡ.
  67. ಅಳಿವುದೇ ಕಾಯ ಉಳಿವುದೇ ಕೀರ್ತಿ.
  68. ಅಳಿಯ ಅಲ್ಲ ಮಗಳ ಗಂಡ.
  69. ಮಾಡಿದವನ ಪಾಪ ಹೇಳಿದವನ ಬಾಯಿಗೆ.
  70. ಆಡಿದರೆ ಅರಗಿಣಿ ಕಾಡಿದರೆ ನಾಗರ ಕಾಟ.
  71. ಪುಸ್ತಕದಲ್ಲಿರೋ ಬಧನೆಕಾಯಿ ಸಾರಿಗೆ ಬಂದಾತೆ.
  72. ಶೂರನಗಿರಬೇಕು. ಆದರೆ ಜಂಬ ಕೊಚ್ಚಿಕೊಳ್ಳಬಾರದು.
  73. ವಿದ್ಯೆಗೆ ವಿನಯವೇ ಭೂಷಣ.
  74. ಒಣ್ಅಗಿದೆ ಅಂತ ಗರಿಕೆಯನ್ನು; ಬಡಕಲು ಅಂತ ಶತ್ರುಗಳನ್ನು ಕಡೆಗಣಿಸಬಾರದು.
  75. ಹುಟ್ಟುತ್ತಾ ಅಣ್ಣತಮ್ಮಂದಿರು; ಬೆಳೆಯುತ್ತಾ ದಾಯಾದಿಗಳು.
  76. ಶುಭ ನುಡಿಯೋ ಸೋಮ ಅಂದ್ರೆ ಗೂಬೆ ಕಾಣಸ್ತಲ್ಲೊ ಮಾಮ ಅಂದ.
  77. ಎದ್ದರೆ ಕಾಲು ಹಿಡಿಯುತ್ತಾರೆ; ಕುಂತರೆ ಜುಟ್ಟು ಹಿಡಿಯುತ್ತಾರೆ.
  78. ಸಂಕಟ ಬಂದಾಗ ವೆಂಕಟ್ರಮಣ.
  79. ತುಂಬಿದ ಕೊಡ ತುಳುಕದು.
  80. ಬೆಕ್ಕಿಗೆ ಆಟ; ಇಲಿಗೆ ಪ್ರಾಣ ಸಂಕಟ.
  81. ಏರಿದವನು ಬಾಗಿರಬೇಕು.
  82. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
  83. ಅಳೋ ಗಂಡ್ಸನ್ನು ನಗೋ ಹೆಂಗ್ಸನ್ನು ನಂಬಬಾರದು.
  84. ಅಯ್ಯೋ ಪಾಪ! ಅಂದ್ರೆ ಅರ್ಧ ಆಯಸ್ಸು.
  85. ಆಡುವವ ಆಡಿದ್ರೆ ನೋಡುವವಗೆ ಸಿಗ್ಗು.
  86. ಅಂಜಿದವನ ಮೇಲೆ ಕಪ್ಪೆ ಹಾರಿದಂಗೆ.
  87. ಬಸವನ ಹಿಂದೆ ಬಾಲ. 
  88. ಹಣ ನೋಡಿದರೆ ಹೆಣವೂ ಬಾಯಿ ಬಿಡುತ್ತದೆ.
  89. ಅಲ್ಲದ ಕನಸು ಕಂಡ್ರೆ ಎದ್ದುಕುಂಡ್ರು.
  90. ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ. 
  91. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು.
  92. ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ.
  93. ಹಣದಿಂದ ಶ್ರೀಮಂತಿಕೆಯಲ್ಲ; ಗುಣದಿಂದ ಶ್ರೀಮಂತಿಕೆ.
  94. ನೂಲಿನಂತೆ ಸೀರೆ; ತಾಯಿಯಂತೆ ಮಗಳು.
  95. ದುಡ್ಡೇ ದೊಡ್ಡಪ್ಪ ವಿದ್ಯೆ ಅದರಪ್ಪ.
  96. ವಿನಾಶಕಾಲೇ ವಿಪರೀತ ಬುದ್ಧಿ.
  97. ಪಾಪಿ ಸಾಗರಕ್ಕೆ ಬಿದ್ದರೂ ಮೊಣಕಾಲುದ್ದ ನೀರು.
  98. ಕಥೆ ಹೆಳೋಕೆ ಹೂಗುಟ್ಟೋರಿರಬೇಕು; ನೆಟ್ಟಗೆ ಬಾಳೋಕೆ ಛೀಗುಟ್ಟೋರಿರಬೇಕು.
  99. ಹುತ್ತ ಹೊಲ ಬಿತ್ತದೆ ಹೋಯಿತು; ಕೊಟ್ಟ ಸಾಲ ಕೇಳದೆ ಹೋಯಿತು.
  100. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು.
  101. ಚಿತೆ ಮನುಷ್ಯನನ್ನು ಸುಟ್ಟರೆ, ಚಿಂತೆ ಮನಸನ್ನು ಸುಡುತ್ತದೆ.
  102. ಮಾತು ಬೆಳ್ಳಿ, ಮೌನ ಬಂಗಾರ.
  103. ಗುಣವಂತೆ ಇರುವ ಗುಡಿಸಲೇ ಲೇಸು.
  104. ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೆ.
  105. ಮಾತು ಆಡಿದರೆ ಹೋಯ್ತು; ಮುತ್ತು ಹೊಡೆದರೆ ಹೋಯ್ತು; ಹೊತ್ತು ಕಳೆದರೆ ಹೋಯ್ತು.
  106. ಚಿಕ್ಕಂದಿನ ವಿದ್ಯೆ ಚೂಡಾರತ್ನ.

Comments

Popular posts from this blog

ಸರ್ವಜ್ಞನ ವಚನಗಳು